ಇಕ್ಬಾಲ್ ಕ್ರೀಡಾಂಗಣ (ಉರ್ದು: اقبال سٹیڈیم) ಟೆಸ್ಟ್ ಕ್ರಿಕೆಟ್ ಮೈದಾನವಾಗಿದೆ. ಇದು ಫೈಸಲಾಬಾದ್, ಪಾಕಿಸ್ತಾನದಲ್ಲಿದೆ. ಈ ಕ್ರೀಡಾಂಗಣದ ಹಿಂದಿನ ಹೆಸರುಗಳು ಲಯಲ್ಪುರ್ ಕ್ರೀಡಾಂಗಣ, ನ್ಯಾಷನಲ್ ಕ್ರೀಡಾಂಗಣ ಮತ್ತು ಸಿಟಿ ಸ್ಟೇಡಿಯಮ್. ಈಗಿನ ಹೆಸರು ಪಾಕಿಸ್ತಾನದ ಕವಿ ಸರ್ ಅಲ್ಮಾಮ ಮುಹಮ್ಮದ್ ಇಕ್ಬಾಲ್ ಅವರನು ಗೌರವ ನೀಡಿ ಹೆಸರಿಸಿದ್ದಾರೆ. ಇದರ ಸಾಮರ್ಥ್ಯ ೧೮,೦೦೦. ಇದು ೨೫ ಟೆಸ್ಟ್ ಪಂದ್ಯಗಳು ಮತ್ತು ೧೪ ಏಕದಿನ ಪಂದ್ಯಗಳನ್ನು ಆಯೋಜಿಸಿದೆ. ೧೪ ಟೆಸ್ಟ್ ಪಂದ್ಯಗಳು ಡ್ರಾ ಆಗಿವೆ. == ಕ್ರೀಡಾಂಗಣ ದಾಖಲೆಗಳು == ಮೊದಲ ಟೆಸ್ಟ್: ಪಾಕಿಸ್ತಾನ ಮತ್ತು ಭಾರತ, ಅಕ್ಟೋಬರ್ ೧೯೭೮. ಮೊದಲ ಏಕದಿನ ಪಂದ್ಯ: ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್, ನವೆಂಬರ್ ೧೯೮೪. == ಟೆಸ್ಟ್ ಪಂದ್ಯಗಳು == ಗರಿಷ್ಠ ಇನ್ನಿಂಗ್ಸ್ ಮೊತ್ತ: ೬-೬೭೪ ಪಾಕಿಸ್ತಾನ, ಭಾರತದ ವಿರುದ್ಧ, ಅಕ್ಟೋಬರ್ ೧೯೮೪. ಕಡಿಮೆ ಇನ್ನಿಂಗ್ಸ್ ಮೊತ್ತ: ೫೩-೧೦ ವೆಸ್ಟ್ ಇಂಡೀಸ್, ಪಾಕಿಸ್ತಾನದ ವಿರುದ್ಧ, ಅಕ್ಟೋಬರ್ ೧೯೮೬. ಗರಿಷ್ಠ ವೈಯಕ್ತಿಕ ಮೊತ್ತ: ೨೫೩ ಸನತ್ ಜಯಸೂರ್ಯ (ಶ್ರೀಲಂಕಾ), ಪಾಕಿಸ್ತಾನದ ವಿರುದ್ಧ, ಅಕ್ಟೋಬರ್ ೨೦೦೪. ಅತ್ಯುತ್ತಮ ಬೌಲಿಂಗ್ ಸಾಧನೆ: ೧೨-೧೩೦ (೭-೭೬ & ೫-೫೪) ವಕಾರ್ ಯೂನಿಸ್ (ಪಾಕಿಸ್ತಾನ), ನ್ಯೂಜಿಲ್ಯಾಂಡ್ ವಿರುದ್ಧ, ಅಕ್ಟೋಬರ್ ೧೯೯೦. == ಏಕದಿನ ಪಂದ್ಯಗಳು == ಗರಿಷ್ಠ ಇನ್ನಿಂಗ್ಸ್ ಮೊತ್ತ: ೭-೩೧೪ (೫೦ ಓವರ್ಗಳು) ಪಾಕಿಸ್ತಾನ, ನ್ಯೂಜಿಲ್ಯಾಂಡ್ ವಿರುದ್ಧ, ಡಿಸೆಂಬರ್ ೨೦೦೩. ಗರಿಷ್ಠ ವೈಯಕ್ತಿಕ ಮೊತ್ತ: ೧೦೬ ಮೊಹಮ್ಮದ್ ಯೂಸುಫ್ (ಪಾಕಿಸ್ತಾನ), ಬಾಂಗ್ಲಾದೇಶದ ವಿರುದ್ಧ, ಸೆಪ್ಟೆಂಬರ್ ೨೦೦೩. ಅತ್ಯುತ್ತಮ ಬೌಲಿಂಗ್ ಸಾಧನೆ: ೪-೨೭ (೪ ಓವರ್ಗಳು) ಮುದಸರ್ ನಝರ್ (ಪಾಕಿಸ್ತಾನ), ನ್ಯೂಜಿಲ್ಯಾಂಡ್ ವಿರುದ್ಧ, ನವೆಂಬರ್ ೧೯೮೪. == ಉಲ್ಲೇಖನಗಳು ==